Images (1)

Mango, The King of Fruits

Home » Creations » Mango, The King of Fruits

ಹಚ್ಚ ಹಸಿರು ಹೊದ್ದು ಬರುವ ವಸಂತವ ಸಂಭ್ರಮಿಸಲು, ಹಳದಿ ಕೆಂಪು ಬಣ್ಣ ಹೊತ್ತು ತರುವ ಕರುನಾಡಿಗೆ ತಿಲಕವಿಡಲು. ಕಾದಿದೆ ಬಿರು ಬೇಸಿಗೆಯು ನಿನ್ನ ಆಗಮನಕೆ, ಆಹ್ವಾನಿಸಿದೆ ಮನವು ಸಿಹಿಔತಣಕೆ.

ಸೋಲದೆ ಇರುವರಾರು ನಿನ್ನ ರುಚಿಗೆ, ಹಿಗ್ಗದೆ ಇರುವರಾರು ನಿನ್ನ ರಂಗಿಗೆ, ಬೆರಗಾಗದೆ ಇರುವರಾರು ನಿನ್ನ ಅದ್ಭುತ ಸೃಷ್ಟಿ ಅಲಂಕಾರಕೆ.

ರಸಪುರಿ ತೊತಾಪುರಿ ರತ್ನಗಿರಿ ಕೇಸರಿ ಹೆಸರಿಗೆ ಮೆರಗು ನಿನ್ನ ಸೊಬಗು, ಅಲ್ಫೋನ್ಸೋ ಬಾದಾಮಿ ಮಲ್ಲಿಕಾ ನಿನ್ನ ಸಿಹಿ ಅವತಾರಕೆ ಕುಣಿದಿದೆ ಮನ ತಕ ತಕ, ಹಂಬಲಿಸಿದೆ ನಾಲಿಗೆ ನೀರೂರಿಸುವ ಮಿಡಿ ಉಪ್ಪಿನಕಾಯಿಗೆ. ಮಲಗೋವಾ, ತಿಂದರೆ ಇನ್ನು ತಿನ್ನಬೇಕವ್ವ. ನೀಲಂ ಪರಿಮಳಕೆ ಬಾಯಿ ಜಲಂ. ಸಿಂಧೂರ, ಸವಿ ಜೇನಿಗಿಂತ ಮಧುರ.

ದಿನದಿನವು ಹಬ್ಬ ನಿನ್ನ ಇರುವಿಗೆ, ಏರುತಿದೆ ಹೃದಯಬಡಿತ ಭೋಜನಪ್ರಿಯರಿಗೆ,  ಸರಿಸಮರಾರು ಹಣ್ಣುಗಳ ರಾಜ ಮಾವು ನಿನಗೆ?!… (ಪ್ರವೀಣ)

Praveena H SLast Seen: Jun 1, 2023 @ 11:54am 11JunUTC

Praveena H S

Praveena-H-S

Published:
Last Updated:
Views: 10
Leave a Reply